Saturday, 17 December 2011

ಪತ್ರಿಕೆ ಹುಟ್ಟಿಕೊಂಡ ಕೂಡಲೇ ಶತ್ರುಗಳು ಹುಟ್ಟಿಕೊಂಡರು

ಎಷ್ಟೊಂದು ಕನಸುಗಳು. ಅವೆಲ್ಲಾ ಸದ್ಯಕ್ಕೆ ನನಸಾಗುವುದು ಕಷ್ಟವೇ. ಆದರೆ ಅಂದುಕೊಂಡಂತೆ ಎಲ್ಲಾ ಆಗುತ್ತಿರುವುದಕ್ಕೆ ಸಂತಸವಿದೆ. ಅದರೊಟ್ಟಿಗೆ ಸಂಕಷ್ಟಗಳು ಹೆಚ್ಚಾಗಿಯೇ ಇವೇ. ಪತ್ರಿಕೆ ಹುಟ್ಟಿಕೊಂಡ ಕೂಡಲೇ ಶತ್ರುಗಳು ಹುಟ್ಟಿಕೊಂಡರು ಎಂದು ಹೇಳಿದ್ದೆನಲ್ಲ, ಅವರೆಲ್ಲಾ ಮಿತ್ರರಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ನಿಜವಾಗಲೂ ಎಷ್ಟು ಜನ ಮಿತ್ರರಿದ್ದಾರೆ ಎಂದರೆ ಒಮ್ಮೊಮ್ಮೆ ಅವರನ್ನು ಗುರುತಿಟ್ಟುಕೊಳ್ಳುವುದು ಕಷ್ಟವೆನಿಸಿಬಿಡುತ್ತದೆ. ಆದರೆ ನನ್ನೆಲ್ಲಾ ಕೆಲಸಗಳ ಮಧ್ಯ ನಾನು ಅವರನ್ನು ಮರೆತರು, ಅವರು ನನ್ನನ್ನು ಮಾತ್ರ ಮರೆಯುವುದೇ ಇಲ್ಲಾ.
ಕೆಲವರು ತಕ್ಷಣಕ್ಕೆ ಗೆಳೆಯರಾದರೆ, ಇನ್ನು ಕೆಲವರು ಮೊದಲಿಗೆ ಶತ್ರುಗಳಾಗಿ, ನಂತರ ಮಿತ್ರರಾದವರು. ಅದೇ ತರಹದ ಒಂದು ಶತ್ರುತ್ವವನ್ನು ನನಗರಿವಿಲ್ಲದೆ ಮೈಮೇಲೆ ಎಳೆದುಕೊಂಡು ಬಿಟ್ಟಿದ್ದೆ. ನನಗೂ ತಕ್ಷಣಕ್ಕೆ ಭಯವಾಯಿತಾದರೂ ನಂತರ ನನ್ನ ಹಿನ್ನೆಲೆ, ನನ್ನ ಪಟಾಲಂನ ಮುಂದೆ ಅವನು ನನ್ನ ರೆಕ್ಕೆಯಲ್ಲೊಂದು ಪುಕ್ಕವು ಅಲ್ಲ ಅನ್ನಿಸಿಬಿಟ್ಟಿತು. ಆದರೂ ಅವರ ಗುಂಪು ನನ್ನ ಯಾವ ಪರಿ ಹುಡುಕಿತ್ತು ಎಂದರೆ, ನನ್ನ ಹುಟ್ಟೂರಿನ ತನಕ ನನ್ನ ಹುಡುಕಿಕೊಂಡು ಒಂದು ಸ್ಕಾರ್ಪಿಯೊ, ಒಂದು ಓಮಿನಿ ಕಾರುಗಳು ಹೋಗಿ ನನ್ನ ಬಗ್ಗೆ ಎಲ್ಲಿಗೆ ಹೋಗುತ್ತೇನೆ, ಎಲ್ಲಿರುತ್ತೇನೆ, ನನ್ನ ತಂದೆ, ತಾಯಿ, ಗೆಳೆಯರು ಎಲ್ಲರನ್ನು ತಿಚಿಣಛಿh ಮಾಡಿದ್ದಾರೆ. ಆ ಕಾರುಗಳಲ್ಲಿ ಅನಾಮತ್ತು ೧೫ ಮಂದಿ ಹುಡುಗರಿದ್ದರು, ನನಗೂ ಆಗಾಗ ಫೋನ್ ಮಾಡಿ ಬೆದರಿಸುತ್ತಿದ್ದರು. ಎಲ್ಲಿದ್ದೀಯಾ, ನೋಡಬೇಕು ಅಂತೆಲ್ಲಾ ಪೀಡಿಸುತ್ತಿದ್ದರು. ಅವರು ಯಾವ ಪರಿ ನನ್ನ ಬೆನ್ನು ಬಿದ್ದಿದ್ದರು ಎಂದರೆ ನನ್ನ ಸಂಪೂರ್ಣ ವಿವರಗಳನ್ನು ಹೆಕ್ಕಿ ತೆಗೆದಿದ್ದರು. ಸಿಕ್ಕದಿದ್ದರೆ ಕೊಚ್ಚಿ ಹಾಕಿಬಿಡುತ್ತಿದ್ದರೇನೋ. ಇದೇ ವಿಷಯವಾಗಿ ನಾನು ನನ್ನ ಊರಿಗೆ ಹೋಗುವುದನ್ನು ಬಿಟ್ಟುಬಿಟ್ಟಿದ್ದೆ. ನನ್ನಿಂದ ನನ್ನವರ‍್ಯಾರಿಗೂ ತೊಂದರೆ ಆಗಬಾರದು ಅನ್ನುವ ಒಂದೇ ಉದ್ದೇಶ ನನ್ನಲ್ಲಿತ್ತು. ಇದರಿಂದ ನಾನು ತುಂಬಾ ಪ್ರೀತಿಸುವ ತಂದೆ-ತಾಯಿಂದ ದೂರಾದೆ, ಆದರೆ ಅವರೇನು ನನ್ನ ಮೇಲೆ ತಪ್ಪು ತಿಳಿದುಕೊಂಡರೂ ಅವರ ಆಶಿರ್ವಾದವಿಲ್ಲದೆ ನಾನೀ ಮಟ್ಟಕ್ಕೆ ಬರಲು ಸಾಧ್ಯವಿರಲಿಲ್ಲ.
ಈ ರೀತಿಯ ಶತ್ರುಗಳು ಇರುತ್ತಾರೆ ಎಂದು ನಾನೀ ಮಾಧ್ಯಮಕ್ಕೆ ಬಂದ ಕೆಲ ತಿಂಗಳುಗಳಲ್ಲೆ ಅರಿತುಕೊಂಡಿದ್ದೆ. ಅದರಿಂದ ನನಗೂ ಬಲಿಷ್ಠವಾದದೊಂದು ಕೈನ ಅಗತ್ಯವಿತ್ತು. ಆ ಕೈ ನನ್ನ ಹೆಗಲಿನ ಮೇಲೆ ಕೈ ಇಟ್ಟು ನಾನಿದ್ದೇನೆ ಎಂದಾಗಲೆ ನಾನು ಭಯವಿಲ್ಲದೆ ಮುಂದೆ ನುಗ್ಗಲು ಸಾಧ್ಯವಾಯಿತು. ನಿರ್ಭಯವಾಗಿ ಅವರ ಸಹಾಯದಿಂದ ಅವರದ್ದೆ ವಾಹನಗಳಲ್ಲಿ ಓಡಾಡಲು, ವರದಿಗಳ ತರಲು ಸಾಧ್ಯವಾದವು. ಕೆಲವು ಪೊಲೀಸ್ ಅಧಿಕಾರಿಗಳಿಗೂ ಅಚ್ಚುಮೆಚ್ಚಿನ ಹುಡುಗನಾಗಿಬಿಟ್ಟೆ. ನನ್ನ ಹತ್ತಿರದಿಂದ ಬಲ್ಲವರು ಬೆಚ್ಚಿ ಬೆರಗಾಗಿದ್ದರು. ಆ ಪರಿಯ ಲಿಂಕುಗಳು, ಸ್ನೇಹಗಳು ನನಗೆ ಸಿಕ್ಕುಬಿಟ್ಟಿದ್ದವು. ಅವರ ನಂಬುಗೆಯ ನಿಯತ್ತು ಕಾಪಾಡಿಕೊಂಡು ಬಂದಿದ್ದೆ. ಅದಿರಲಿ ನನ್ನ ಹುಡುಕಿಕೊಂಡು ಬಂದ ಆ ಹುಡುಗರ ಗುಂಪಿನಿಂದ ಎಲ್ಲಿ ನನ್ನವರಿಗೆ ತೊಂದರೆ ಆದೀತೊ ಎಂದು ಅವರನ್ನು ನಾನೇ ಕರೆಸಿಕೊಂಡು ಮಾತನಾಡಿದೆ. ಆತ ಗಲ್ಲಿ ರೌಡಿ. ಬಂದವನು ನೀನು ಯಾರು ಅಂತ ನನಗೆ ಗೊತ್ತಿರಲಿಲ್ಲ. ನಿನ್ನ ಕ್ರಿಮಿ ಅಂದುಕೊಂಡಿದ್ದೆ, ನೀನು ಕ್ರಿಮಿನಲ್ ಅಂತ ಗೊತ್ತಾಯ್ತು. ಎಂತಹವರನ್ನು ಇಕ್ಕಟ್ಟಿಗೆ ಸಿಲುಕಿಸೊದು ನಿನಗೆ ಕಷ್ಟ ಅಲ್ಲ. ನಾನು ಬಂದಿದ್ದು, ನಿನ್ನ ಹುಡುಕಿದ್ದು ರಾಜಿ ಮಾಡಿಕೊಳ್ಳೊದಿಕ್ಕೆ ಹೊರತು ನಿನ್ನ ಮುಗಿಸೋಕ್ಕಲ್ಲ. ಪತ್ರಿಕೆ ರಿಪೋರ್ಟ್‌ರ್ ಅಂದರೆ ಪೆನ್ನು ಪೇಪರಿಗಷ್ಟೆ, ಅಷ್ಟು ಬಿಟ್ಟರೆ ಅವರಿಗೆ ಯಾವುದೆ ಬಲ ಇಲ್ಲ ಅಂದುಕೊಂಡಿದ್ದೆ. ಆದರೆ ನಿನಗಿರುವ ಕಾಂಟ್ಯಾಕ್ಟು ದೊಡ್ಡದು. ನಿನಗೆ ಹೊಡೆದರೆ ನಾನು, ನಮ್ಮವರು ಉದುರಿ ಹೋಗ್ತೀವಿ ಅಂತ ಗೊತ್ತಾಯ್ತು. ನೋಡು ನಮಗೂ, ನಿನಗೂ ಗಲಾಟೆ ಬೇಡ. ನಮ್ಮ ಇಂಜಿನಿಯರ್ ವಿಷಯಕ್ಕೆ ಹೋಗಬೇಡ. ಅವರೇನೊ ಕಾಂಟ್ರ್ಯಾಕ್ಟುಗಳನ್ನು ತಗೊಂಡು ಸಣ್ಣ ಪುಟ್ಟ ಕೆಲಸ ಮಾಡಿಸ್ತಾರೆ. ನಿನಗೇನಾದರೂ ಸಹಾಯ ಬೇಕಾದರೆ ಮಾಡಿಸ್ತೀವಿ ಅಂದ. ಇಲ್ಲಿ ಅಸಲಿ ನಡೆದುದ್ದೇನೆಂದರೆ ಬೆಂಗಳೂರಿನ ಏರಿಯವೊಂದರ ರಸ್ತೆ ಕಾಮಗಾರಿ ನಡೀತಿತ್ತು, ಆಟೋದಲ್ಲಿ ಹೋಗುತ್ತೀವಿ, ಆಟೋ ಡ್ರೈವರ್ ಬೈಯುತ್ತಲೆ ಆಟೋ ಓಡಿಸುತ್ತಿದ್ದ. ಅಲ್ಲಿ ಕೆಲಸ ಮಾಡುವವನೊಬ್ಬನನ್ನು ಕರೆದು ಯಾರಪ್ಪ ಕಂಟ್ರ್ಯಾಕ್ಟರು ಅಂದಿದ್ದೆ ಆತ ಹೇಳಲಿಲ್ಲ ನನ್ನ ಹೆಸರು, ವಿಸಿಟಿಂಗ್ ಕಾರ್ಡ್ ಕೇಳಿ ಪಡೆದಿದ್ದೆ ಅಷ್ಟೆ. ಅಷ್ಟಕ್ಕೆ ಬೆಚ್ಚಿಬಿದ್ದಿದ್ದರು. ನನ್ನ ಹಿಂಬಾಲಿಸಿದರು. ತಲೆ ಹಾಕವ್‌ನೆ ಯಾರೋ ಅಂತ. ಆತನ ರೌಡಿಪಡೆ ನನ್ನಿಂದೆ ಬಿದ್ದಿತ್ತು. ನಾನು ನಕ್ಕು ಸುಮ್ಮವಾದೆ. ಆತ ನನಗೂ ೩ ವರ್ಷದಿಂದ ಪರಿಚಯದವನೆ. ನನ್ನ ಮುಖನೋಡಿದವನು ನಕ್ಕಿದ್ದ. ಹಾಗೆ ಎಲ್ಲರೂ ಹೋಟೆಲ್ಲಿನಲ್ಲಿ ಊಟಮಾಡಿದೆವು. ತನ್ನದೆ ಕಾರಿನಲ್ಲಿ ತಂದು ಮನೆಯ ತನಕ ಬಿಟ್ಟು ಹೋಗಿದ್ದ.
ಚಿಕ್ಕವನಿದ್ದಾಗ ಟಿ.ವಿಯಲ್ಲಿ ಪಾತಕಿಗಳನ್ನು ನೋಡಿ ಹೆದರುತ್ತಿದ್ದೆನು. ಆದರೆ ಅವರ ಜೊತೆ ಕೂತು ನಾನು ಮಾತನಾಡುವಾಗ ಏನು ಮಾತನಾಡಿದರೆ ಹೆಚ್ಚಾದೀತು ಅಂತ ಅವರೇ ಸರಿಯಾಗಿ ಮಾತನಾಡುತ್ತಿರಲಿಲ್ಲ. ಎಲ್ಲಕ್ಕೂ ಒಂದು ಕಾಲ ಅನ್ನುವುದಿರುತ್ತಲ್ಲ. ಅದು ಒಂದೇ ರೀತಿ ಇರೊದಿಲ್ವಲ್ಲ. ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ಹಲವು ವರದಿಗಳ ಬರೆದಿದ್ದೆ. ಆದರೆ ಆತ ದೊಡ್ಡ ಮನುಷ್ಯ. ಹೆಗಲ ಮೇಲೆ ಕೈ ಇಟ್ಟು ಬ್ರದರ್ ಅಂತಾನೆ ಮಾತನಾಡಿಸುತ್ತಾರೆ. ಮನಸ್ಸಿನಲ್ಲಿ ಮತ್ತೊಬ್ಬರ ಬಗ್ಗೆ ಕೆಡುಕು ಎಣಿಸುವುದಿಲ್ಲ. ಅಂದ ಹಾಗೆ ಕುಮಾರಸ್ವಾಮಿಯವರನ್ನು ನಾನು ಭೇಟಿಯಾದದ್ದು ಎರಡೇ ಬಾರಿ. ಒಂದು ರಾಮನಗರದ ವಂಚಕರ ಬಗ್ಗೆ ದೂರಿತ್ತಾಗ ಮತ್ತೊಮ್ಮೆ ಯಾರದೋ ಕಷ್ಟಕ್ಕೆ ಅಂತ ಹೋದಾಗ, ನೋಡಿ ಬ್ರದರ್ ನಮ್ಮವರಾಗಲಿ, ಯಾರಾದ್ರೂ ಆಗಲಿ ಅವರು ಎಂತಹವರು ಅಂತ ನನಗೆ ಗೊತ್ತಿರೊದಿಲ್ಲ. ಅದನ್ನ ನೀವೇ ತಿಳಿಸಬೇಕು. ನನ್ನವರೆ ತಪ್ಪು ಮಾಡಿ ಅದರಿಂದ ಜನರಿಗೆ ಅನ್ಯಾಯವಾಗಿದ್ದರೆ ನಾನು ಯಾರನ್ನು ನೋಡೊದಿಲ್ಲ. ಭಯ ಇಲ್ಲದೆ ಅಂತವರ ವಿರುದ್ಧ issue ಮಾಡಿ ಬ್ರದರ್, ಟೈಂ ಇಲ್ಲ, ಬೇಜಾರ್ ಮಾಡ್ಕೊಬೇಡಿ ಎಂದಷ್ಟೆ ಹೇಳಿ ಜಯನಗರದ ಮನೆಯಿಂದ ಹೊರಟರು. ಅವರ ವೈಯಕ್ತಿಕ ಬದುಕು ರಾಜಕೀಯದ ಒಡನಾಟ ಎರಡು ನೇರಾ ನೇರಾ ಅನಿಸ್ತು. ಅಂದು ಟಿ.ವಿ.ಯೊಂದರ ವರದಿಗಾರ ನಾನು ಕುಮಾರಸ್ವಾಮಿಯವರ ಬಗ್ಗೆ ಒಂದು ಗಂಟೆಗೂ ಹೆಚ್ಚು ಮಾತನಾಡಿದ್ದೆವು. ಅದು ಹೊರ ಜಗತ್ತಿಗೆ ಗೊತ್ತಿಲ್ಲದ ವಿಷಯಗಳು. ಕುಮಾರಸ್ವಾಮಿ ಬಳಿ ತಿನ್ನದವರಿಲ್ಲ ಅನಿಸ್ತು. ಕುಮಾರಸ್ವಾಮಿಯವರಿಗೆ ಗೊತ್ತಿಲ್ಲದೆ ಅವರ ಜೊತೆಗಿದ್ದುಕೊಂಡು ಮಾಡಿರುವ ವಂಚನೆಗಳಿವೆಯಲ್ಲ ಅಂತಹವರು ಈ ಬೆಂಗಳೂರಿನಲ್ಲಿ ಸಾಕಷ್ಟಿದ್ದಾರೆ.

No comments:

Post a Comment